Yash: ಬರ್ತಡೆ ಅಂದ್ರೆ ನನಗೆ ಭಯ ಬಂದಿದೆ: ಫ್ಯಾನ್ಸ್ ಸಾವಿಗೆ ಯಶ್ ಹೇಳಿದ್ದೇನು?

WhatsApp Group Join Now
Telegram Group Join Now
ದಗ, ಜನವರಿ 09: ನಟ ಯಶ್‌ ಅವರ ಹುಟ್ಟು ಹಬ್ಬದ ಹಿನ್ನೆಲೆ ಬ್ಯಾನರ್​ ಕಟ್ಟಲು ಹೋದ ಅಭಿಮಾನಿಗಳು ನಿಧನರಾಗಿದ್ದು, ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ಆಗಮಿಸಿ ಮೃತರಾದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ಅವರ ಕುಟುಂಬದ ಸದಸ್ಯರನ್ನು ಯಶ್​ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ನಟ ಯಶ್‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರತಿ ವರ್ಷ ಬರ್ತ್​ಡೇ ಬಂದಾಗ ಇಂಥ ಒಂದು ಘಟನೆ ನಡೆದರೆ ಬರ್ತ್​ಡೇ ಎಂದರೆ ನನಗೆ ಭಯ ಬಂದಿದೆ. ನಿಜ ಹೇಳಬೇಕು ಎಂದರೆ ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ ಎಂದು ಅಭಿಮಾನಿಗಳ ನಿಧನರಾಗಿದ್ದಕ್ಕೆ ಯಶ್​ ಬೇಸರ ವ್ಯಕ್ತಪಡಿಸಿದ್ದಾರೆ. ಬ್ಯಾನರ್​ ಹಾಕಿ ಅಭಿಮಾನ ವ್ಯಕ್ತಪಡಿಸಬೇಕು ಎಂಬುದನ್ನು ನಾವು ಯಾರೂ ಇಷ್ಟಪಡುವುದಿಲ್ಲ. ಎಲ್ಲಿಂದಲೋ ಅವರು ಪ್ರೀತಿಯಿಂದ ಹರಸಿದರೆ ಸಾಕು. ಇದೇ ನಿಜವಾದ ಬರ್ತ್​ಡೇ. ಈ ಮೂಲಕ ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ.
ಬ್ಯಾನರ್​ ಕಟ್ಟುವುದು, ಬೈಕ್​ನಲ್ಲಿ ಚೇಸ್​ ಮಾಡುವುದನ್ನೆಲ್ಲ ಬಿಟ್ಟು ಬಿಡಿ. ನಿಜವಾಗಿಯೂ ನೀವು ಪ್ರೀತಿ ತೋರಿಸಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಖುಷಿಯಾಗಿರಿ. ಅದೇ ಸಾಕು ಎಂದು ಯಶ್‌ ಹೇಳಿದ್ದಾರೆ. ನಮ್ಮ ಬರ್ತ್​ಡೇಯಿಂದ ಯಾರಿಗೂ ತೊಂದರೆ ಆಗಬಾರದು ಅಂತ ನಾನು ಈ ವರ್ಷ ಎಲ್ಲರ ಜೊತೆ ಆಚರಣೆ ಬೇಡ ಅಂತ ನಿರ್ಧರಿಸಿದೆ. ಬೇಡ ಎಂದರೂ ಅಭಿಮಾನಿಗಳು ಬೇಜಾರು ಮಾಡಿಕೊಳ್ಳುತ್ತಾರೆ.
ನನ್ನ ಬಗ್ಗೆ ಬೇಜಾರು ಮಾಡಿಕೊಂಡರೂ ಪರವಾಗಿಲ್ಲ ಅಂತ ನಾನು ದೂರ ಇರುತ್ತೇನೆ. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಿನಲ್ಲಿ ಬೆಳೆದರೆ ಅದೇ ನಮಗೆ ಅವರು ಅಭಿಮಾನ ತೋರಿಸಿದಂತೆ ಎಂದು ಹೇಳಿದ್ದಾರೆ.
Yash :
ಕಾಸು ಯಾರ್ ಬೇಕಾದ್ರೂ ಕೊಡ್ತಾರೆ, ಮನೆ ಮಗ ಮತ್ತೆ ಬರ್ತಾನ? ಅಭಿಮಾನಿಗಳಿಗೆ ಯಶ್ ಮನವಿ ಮಾಡಿದ್ದೇನು? ಸಹಾಯ ಯಾರು ಬೇಕಾದರೂ ಮಾಡಬಹುದು. ಮನೆಗೆ ಮಗ ಬರುತ್ತಾನಾ? ಕುಟುಂಬದಲ್ಲಿ ಮಕ್ಕಳನ್ನು ಕಳೆದುಕೊಂಡವರು ಏನು ಹೇಳಲು ಸಾಧ್ಯ? ನಮ್ಮ ಮನೆಗಳಲ್ಲಿ ಸಾವಾದರೂ ಹಾಗೆ ಅಲ್ಲವೇ? ಆ ಹುಡುಗರು ಇನ್ನೂ ಚಿಕ್ಕ ವಯಸ್ಸಿನವರು. ಈಗ ನಾನು ಪರಿಹಾರ ಘೋಷಣೆ ಮಾಡುವುದು ದೊಡ್ಡ ವಿಷಯ ಅಲ್ಲ. ಏನು ಬೇಕಾದರೂ ನಾನು ಮಾತಾಡಬಹುದು. ಆದರೆ ನಿಜವಾಗಿ ಇವರ ಕುಟುಂಬಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು ಮಾಡೋಣ ಎಂದು ತಿಳಿಸಿದ್ದಾರೆ.
ಅಭಿಮಾನಿಗಳ ಕುಟುಂಬಕ್ಕೆ ಮಾಡಬೇಕಾಗಿದ್ದನ್ನು ನಾನು ಮಾಡುತ್ತೇನೆ. ಇಂದು ಯಾಕೆ ಬಂದು ನೋಡುತ್ತೇವೆ ಎಂದರೆ, ತಂದೆ-ತಾಯಿ ಮೇಲೆ ಇರುವ ಗೌರವಕ್ಕೆ. ಈ ಪ್ರಕರಣದಲ್ಲಿ ಆಗಿದ್ದು ಅವಘಡ. ಅವರಿಗೆ ಗೊತ್ತಾಗದೆಯೇ ಹೀಗೆ ಆಗಿದೆ. ನಮ್ಮ ಮೇಲಿನ ಅಭಿಮಾನಕ್ಕಾಗಿ ನಿಮ್ಮ ಜೀವಕ್ಕೆ ಹಾನಿ ಮಾಡಿಕೊಳ್ಳಬೇಡಿ. ಪ್ರೀತಿ, ಗೌರವ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಅಭಿಮಾನಿಗಳ ಸಾವಿನ ಕುರಿತು ನೋವಿನ ಮಾತುಗಳನ್ನ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Back to top button