ರಾಮದುರ್ಗ ಸರ್ಕಾರಿ ಆಸ್ಪತ್ರೆ; ವೈದ್ಯರ ಕೊರತೆ

WhatsApp Group Join Now
Telegram Group Join Now

ರಾಮದುರ್ಗ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರ ಆರೋಗ್ಯ ಕಾಪಾಡಬೇಕಾದ ಇಲ್ಲಿನ ಸರ್ಕಾರಿ ಆಸ್ಪತ್ರೆಯು ವೈದ್ಯರಿಲ್ಲದೆ ರೋಗಗಸ್ಥವಾಗಿದೆ.

ಉಳ್ಳವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಬಡವರಿಗೆ ಸರ್ಕಾರಿ ಆಸ್ಪತ್ರೆಯೊಂದೇ ಗತಿ ಎಂಬಂತಾಗಿದೆ.

ವೈದ್ಯರಿಲ್ಲದ ಕೊರಗು ಇನ್ನಿಲ್ಲದಂತೆ ಕಾಡುತ್ತಿದೆ. ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿಗೆ ಸರಿಯಾದ ಸಂಪರ್ಕ ಇಲ್ಲದ ಕಾರಣಕ್ಕೆ ಇಲ್ಲಿಗೆ ವೈದ್ಯರು ಬರಲು ಮುಂದಾಗುತ್ತಿಲ್ಲ ಎಂಬ ಆರೋಪ ಜನರದ್ದು.

ಪಕ್ಕದ ಸವದತ್ತಿ, ಬೈಲಹೊಂಗಲ, ಗೋಕಾಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ವೈದ್ಯರು ಇದ್ದಾರೆ. ಆದರೆ ಇಲ್ಲಿ, 16 ವೈದ್ಯರು ಅಗತ್ಯವಿದ್ದರೂ, ಇರುವುದು 6 ಮಂದಿ ವೈದ್ಯರು ಮಾತ್ರ. ಎಲ್ಲ ವಿಭಾಗಗಳಲ್ಲೂ ಅವರೇ ಕೆಲಸ ಮಾಡಬೇಕಿದೆ.

‘ಸುಮಾರು ₹1.5 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಪುನರ್‌ನಿರ್ಮಾಣ ಮಾಡಿ, ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. 100 ಹಾಸಿಗೆಗಳ ಸೌಲಭ್ಯವಿದೆ. ಇರುವ ವೈದ್ಯರಲ್ಲಿ ಕೆಲವರು ಹೊರ ರೋಗಿಗಳ ವಿಭಾಗದ ನೋಡಿಕೊಂಡರೆ, ಉಳಿದವರು ಬೇರೆ ಕಡೆ ಹೋಗುತ್ತಿದ್ದಾರೆ’ ಎನ್ನುವುದು ರೋಗಿಗಳ ಅಳಲು.

WhatsApp Group Join Now
Telegram Group Join Now
Back to top button