Month: May 2024

  • Local Newsಶಾಲೆಗಳಲ್ಲಿ ಡೋನೆಶನ್ ಪಡೆದರೆ ನೋಂದಣಿ ರದ್ದು: ಡಿಸಿ ನಿತೇಶ್‌ ಪಾಟೀಲ ಎಚ್ಚರಿಕೆ

    ಶಾಲೆಗಳಲ್ಲಿ ಡೋನೆಶನ್ ಪಡೆದರೆ ನೋಂದಣಿ ರದ್ದು: ಡಿಸಿ ನಿತೇಶ್‌ ಪಾಟೀಲ ಎಚ್ಚರಿಕೆ

    ಬೆಳಗಾವಿ: ಜಿಲ್ಲೆಯ ಅನುದಾನ ರಹಿತ ಅಥವಾ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಯಾವುದೇ ರೀತಿಯ ಡೊನೇಶನ್ ಪಡೆಯುವಂತಿಲ್ಲ. ಒಂದು ವೇಳೆ ಕಾನೂನುಬಾಹಿರವಾಗಿ ಡೊನೇಶನ್ ಪಡೆದಿರುವುದು ಕಂಡುಬಂದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವು ಶಾಲೆಗಳಲ್ಲಿ ಡೊನೇಶನ್ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿರುತ್ತವೆ. ನಿಯಮಾನುಸಾರ ಸರಕಾರವು ನಿಗದಿಪಡಿಸಿದ ಶುಲ್ಕಗಳನ್ನು ಮಾತ್ರ ಪಡೆದುಕೊಂಡು ಪ್ರವೇಶ ಕಲ್ಪಿಸಬೇಕು. ಒಂದು ವೇಳೆ ಕಾನೂನುಬಾಹಿರವಾಗಿ ಡೊನೇಶನ್ ಪಡೆದರೆ ಆ‌ರ್.ಟಿ.ಇ. ಕಾಯ್ದೆ…

    Read More »
  • State Newsಡಿವೈಎಸ್‌ಪಿ-ಸಿಪಿಐ ಅಮಾನತು

    ಡಿವೈಎಸ್‌ಪಿ-ಸಿಪಿಐ ಅಮಾನತು

    ಮೈಸೂರು: ದಾವಣಗೆರೆಯ  ಚನ್ನಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳ ಅಮಾನತಿಗೆ ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಚನ್ನಗಿರಿಯಲ್ಲಿ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಮೂರ್ಛೆ ರೋಗದಿಂದ ಮೃತಪಟ್ಟಿದ್ದಾನೆಯೇ ವಿನಃ ಅದು ಲಾಕಪ್‌ ಡೆತ್‌ ಅಲ್ಲ. ಪೊಲೀಸರು ಆ ವ್ಯಕ್ತಿಯನ್ನು ಎಫ್‌ಐಆರ್‌ ಇಲ್ಲದೇ ಠಾಣೆಗೆ ಕರೆತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿದ್ದಾಗಲೇ ಮೃತಪಟ್ಟ ಆದಿಲ್ ಚನ್ನಗಿರಿ ಪಟ್ಟಣದ ಟಿಪ್ಪು ನಗರದವರು. ಮೂಲತಃ ಕಾರ್ಪೆಂಟರ್. ಆದರೆ, ಮಟ್ಕಾ ಏಜೆಂಟ್ ಎಂಬ ಆರೋಪದ ಮೇಲೆ ಪೊಲೀಸರು ಆತನನ್ನು…

    Read More »
  • State Newsಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

    ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

    ಮೈಸೂರು: ಒಂದು ವರ್ಷದ ಹಿಂದೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಹೋಟೆಲ್ ಕೊಠಡಿ ಬಾಡಿಗೆ ಇದುವರೆಗೂ ಪಾವತಿಸಿದ ಅರಣ್ಯ ಇಲಾಖೆ, 80 ಲಕ್ಷ ಹಣ ಬಾಕಿ ಇರಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50 ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಮೈಸೂರಿನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.   ಈ ಕಾರ್ಯಕ್ರಮಕ್ಕೆ ಆರು ಕೋಟಿ‌ ರೂ ವೆಚ್ಚವಾಗಿತ್ತು. ಆದರೆ ಬಿಡುಗಡೆಯಾಗಿರುವುದು ಮೂರು…

    Read More »
  • India Newsಮತ ಚಲಾಯಿಸಿದ ಗಾಂಧಿ ಕುಟುಂಬ, ತಾಯಿ ಸೋನಿಯಾ ಜೊತೆ ರಾಹುಲ್ ಸೆಲ್ಫಿ, ಹಕ್ಕು ಚಲಾಯಿಸಿದ ಪ್ರಿಯಾಂಕಾ

    ಮತ ಚಲಾಯಿಸಿದ ಗಾಂಧಿ ಕುಟುಂಬ, ತಾಯಿ ಸೋನಿಯಾ ಜೊತೆ ರಾಹುಲ್ ಸೆಲ್ಫಿ, ಹಕ್ಕು ಚಲಾಯಿಸಿದ ಪ್ರಿಯಾಂಕಾ

    ನವದೆಹಲಿ(ಮೇ.25): ಲೋಕಸಭೆ ಚುನಾವಣೆ 2024 ರ ಆರನೇ ಹಂತದ ಮತದಾನ ಇಂದು (ಮೇ 25) ನಡೆಯುತ್ತಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಸಂಸದ ರಾಹುಲ್ ಗಾಂಧಿ ಮತ ಚಲಾಯಿಸಲು ದೆಹಲಿ ತಲುಪಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಮತದಾನ ಮಾಡಲು ಆಗಮಿಸಿದ್ದಾರೆ. ಮತದಾನದ ನಂತರ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ರಾಹುಲ್ ಗಾಂಧಿ, ಪೋಸ್ಟ್ ಮಾಡುವಾಗ ಕೆಲವು ನಿರ್ದಿಷ್ಟ ವಿಷಯಗಳ ಕುರಿತು ಬರೆದುಕೊಂಡ ರಾಹುಲ್ ಗಾಂಧಿ, ಇಂದು ಆರನೇ ಹಂತದ…

    Read More »
  • India NewsLok Sabha Election 2024: 6ನೇ ಹಂತದ ಚುನಾವಣೆ, 11 ಗಂಟೆವರೆಗೆ 25.76% ಮತದಾನ, ಬಿಹಾರದಲ್ಲಿ ಅಧಿಕ

    Lok Sabha Election 2024: 6ನೇ ಹಂತದ ಚುನಾವಣೆ, 11 ಗಂಟೆವರೆಗೆ 25.76% ಮತದಾನ, ಬಿಹಾರದಲ್ಲಿ ಅಧಿಕ

    ಬೆಂಗಳೂರು, ಮೇ 25: ಭಾರತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಅಂತಿಮ ಘಟ್ಟದತ್ತ ಸಾಗಿದೆ. ಇಂದು ಶನಿವಾರ (ಮೇ 25) ದೇಶದ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ಮತದಾರರು ಮತ ಚಲಾಯಿಸಲಿದ್ದಾರೆ.   ಇದು 08 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತದಾರರು ಬರೆಯಲಿದ್ದಾರೆ. ಆಯಾ ರಾಜ್ಯಗಳ ಚುನಾವಣಾ ಅಧಿಕಾರಿಗಳು ಅಗತ್ಯ ಸಿದ್ಧತೆಯೊಂದಿಗೆ ಈಗಾಗಲೇ…

    Read More »
  • Local Newsಡಿವೈಎಸ್‌ಪಿ-ಸಿಪಿಐ ಅಮಾನತು

    PDO ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಅಮಾನತು

    ಮೈಸೂರು: ಮೈಸೂರು ಜಿಲ್ಲೆಯ ತಗಡೂರಿನಲ್ಲಿ ಮೂವರಿಗೆ ಕಾಲರಾ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮದ ಪಿಡಿಒ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ತಗಡೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮಸ್ಥರು ವಾಂತಿ ಮತ್ತು ಭೇದಿಯಿಂದ ಅಸ್ವಸ್ಥರಾಗಿದ್ದರು. ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ೧೧೪ ಜನರ ಪರೀಕ್ಷಿಸಿದ್ದಾರೆ. ಈ ವೇಳೆ ಮೂವರಲ್ಲಿ ಕಾಲಾರ ಇರುವುದು ಪತ್ತೆಯಾಗಿದೆ. ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ವಿಫಲರಾದ ಗ್ರಾಮದ ಪಿಡಿಒ ದಿವಾಕರ್‌ ಹಾಗೂ ಕಾರ್ಯಾಪಾಲಕ ಇಂಜಿನಿಯರ್‌ ಶಿವಕುಮಾರ್‌ ಅವರನ್ನು ಅಮಾನತು ಮಾಡಿ ಮೈಸೂರು ಜಿಲ್ಲಾ…

    Read More »
  • India Newsಕುಷ್ಟಗಿ ಆರ್‌ಡಬ್ಲೂಎಸ್‌ ಕಚೇರಿ: ಸಹಿ ಪುಸ್ತಕದಲ್ಲಿ ಹಾಜರ್; ಕರ್ತವ್ಯಕ್ಕೆ ಚಕ್ಕರ್

    ಕುಷ್ಟಗಿ ಆರ್‌ಡಬ್ಲೂಎಸ್‌ ಕಚೇರಿ: ಸಹಿ ಪುಸ್ತಕದಲ್ಲಿ ಹಾಜರ್; ಕರ್ತವ್ಯಕ್ಕೆ ಚಕ್ಕರ್

    ಕುಷ್ಟಗಿ: ಅದು ತಾಲ್ಲೂಕಿನ 172 ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವದ ಜವಾಬ್ದಾರಿ ನಿಭಾಯಿಸುವ ಕಚೇರಿ. ಎಲ್ಲ ಕೊಠಡಿಗಳಲ್ಲಿ ವಿದ್ಯುತ್‌ ಲೈಟ್‌ ಉರಿಯುತ್ತಿದ್ದರೆ, ಫ್ಯಾನ್‌ಗಳು ತಿರುಗುತ್ತಿದ್ದವು. ಬೆರಳೆಣಿಕೆ ಸಿಬ್ಬಂದಿಯಲ್ಲಿ ಒಬ್ಬರೂ ಅಲ್ಲಿರಲಿಲ್ಲ. ಬೆಳಿಗ್ಗೆ ಕಚೇರಿಗೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೊರ ಹೋದವರು ಮರಳಿ ಕಚೇರಿಗೆ ಬಂದಿರಲಿಲ್ಲ. ಹಾಗಾಗಿ ಅಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಹೇಳುವ ಕೇಳುವವರಿಲ್ಲದೆ ಕಚೇರಿ ಭಣಗುಡುತ್ತಿತ್ತು. ಪಟ್ಟಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಉಪ ವಿಭಾಗ (ಆರ್‌ಡಬ್ಲೂಎಸ್‌) ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ ಕಚೇರಿ ಅವಧಿಯಲ್ಲಿ ಕಂಡುಬಂದ…

    Read More »
  • Local Newsರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

    ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

    ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ ಬೆಳಗಾವಿ:ಜಿಲ್ಲೆಯ ಪ್ರಮುಖ ರೈತ ಹಾಗೂ ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಗುರವಣ್ಣವರ ನಿಧನ ಹೊಂದಿದ್ದಾರೆ. ಅನಾರೋಗ್ಯ ನಿಮಿತ್ತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ ಎಂದು ಕುಟುಂಬ ಮೂಲ ಸ್ಪಷ್ಟಪಡಿಸಿದೆ. ಕಬ್ಬಿನ ಬೆಲೆ, ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಹೊಲಗಳಿಗೆ ರಸ್ತೆ, ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ, ಕಾರ್ಮಿಕರ ಬದುಕು ಭವನೆಗಳ ಬಗೆಗೆ ಜಯಶ್ರೀ ತೀವ್ರ ಹೋರಾಟ ನಡೆಸಿ ಗಮನ ಸೆಳೆದಿದ್ದರು‌. ನಡುವಯಸ್ಸಿನಲ್ಲಿ ಜಯಶ್ರೀ ಅವರ ಸಾವು ರೈತ ಹೋರಾಟಕ್ಕೆ ಕುಂದು ತಂದಿದೆ.

    Read More »
  • Local Newsಮೇ.25 ರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ: ಸಚಿವ ಸತೀಶ್‌ ಜಾರಕಿಹೊಳಿ

    ಮೇ.25 ರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ: ಸಚಿವ ಸತೀಶ್‌ ಜಾರಕಿಹೊಳಿ

    ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ, ಘಟಪ್ರಭೆ ಬಲದಂಡೆ, ಎಡದಂಡೆ ಕಾಲುವೆಗೆ ಮೇ, 25 ರಿಂದ ಜೂನ್‌ 4ರ ವರೆಗೆ 5.578 ಟಿಎಂಸಿ ನೀರು ಹರಿಸಲಾಗುತ್ತಿದ್ದು, ನೀರು ಪೋಲಾಗದಂತೆ, ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ರೈತರಿಗೆ, ಸಾರ್ವಜನಿಕರಿಗೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರಸ್ತುತ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು, ಮೇ, 25 ರಿಂದ ಜೂನ್‌ 4ರ ವರೆಗೆ ಹಿಡಕಲ್ ಜಲಾಶಯದಿಂದ…

    Read More »
  • State NewsGruha lakshmi scheme | ಪೆಂಡಿಂಗ್ ಹಣ ಸೇರಿ 9 & 10ನೇ ಕಂತಿನ ಹಣ ಈಗ ಜಮಾ | ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ..

    Gruha lakshmi scheme | ಪೆಂಡಿಂಗ್ ಹಣ ಸೇರಿ 9 & 10ನೇ ಕಂತಿನ ಹಣ ಈಗ ಜಮಾ | ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ..

    Gruha lakshmi scheme :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಪೆಂಡಿಂಗ್ ಹಣ ಯಾರಿಗೆ ಬಂದಿಲ್ಲ ಮತ್ತು ಒಂಬತ್ತನೇ ಕಂತಿನ ಹಣ ಇವಾಗ ಜಮಾ ಆಗಿದೆ, 9ನೇ ಕಂತಿನ ಗೃಹಲಕ್ಷ್ಮಿಹಣ ಜಮಾ ಆಗಿದೆ ಎಂದು ಈಗ ಚೆಕ್ (Gruha lakshmi scheme)  ಮಾಡಿಕೊಳ್ಳುವುದು ಮತ್ತು ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಆದಕಾರಣ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ. Gruha…

    Read More »
Back to top button