15.50 ಕೋಟಿ ರೂಪಾಯಿಯ ಗಾಂಜಾ ಚೆಕ್‌ಪೋಸ್ಟ್‌ನಲ್ಲಿ ಜಪ್ತಿ

WhatsApp Group Join Now
Telegram Group Join Now

ಬೀದರ್: ನೆರೆ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ 15.50 ಕೋಟಿ ರೂಪಾಯಿಯ ಗಾಂಜಾವನ್ನು ಬೀದರ್ ಮತ್ತು NCB ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ಮಾಡಿ ಸೀಜ್ ಮಾಡಿದ್ದಾರೆ. ಅಪಾರ ಪ್ರಮಾಣದ ಗಾಂಜಾವನ್ನ ಔರಾದ್ ತಾಲೂಕಿನ ವನಮಾರಪಳ್ಳಿ ಚೆಕ್‌ಪೋಸ್ಟ್‌ನಲ್ಲಿ ಜಪ್ತಿ ಮಾಡಲಾಗಿದೆ.

ಹುಮನಾಬಾದ್ ಮೂಲದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ವನಮಾರಪಳ್ಳಿ ಚೆಕ್‌ಪೋಸ್ಟ್‌ನಲ್ಲಿ ಬೀದರ್ ಮತ್ತು NCB ಬೆಂಗಳೂರು ಪೊಲೀಸರ ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆಂಧ್ರಪ್ರದೇಶದಿಂದ ಮಹಾರಾಷ್ಟ್ರಕ್ಕೆ ಭಾರೀ ಪ್ರಮಾಣದಲ್ಲಿ ಗಾಂಜಾವನ್ನು ವಾಹನದ ಮೂಲಕ ಸಾಗಾಟ ಮಾಡುತ್ತಿದ್ದರು. ಆಗ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿದ ಪೊಲೀಸರಿಗೆ ಗಾಂಜಾ ಇರುವುದು ಪತ್ತೆಯಾಗಿದೆ.

ವಾಹನದಲ್ಲಿ ಒಟ್ಟು 1,596 ಕೆಜಿಯ 15.50 ಕೋಟಿ ಮೌಲ್ಯದ ಗಾಂಜಾವನ್ನ ಸದ್ಯ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

WhatsApp Group Join Now
Telegram Group Join Now
Back to top button