PDO ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಅಮಾನತು

WhatsApp Group Join Now
Telegram Group Join Now

ಮೈಸೂರು: ಮೈಸೂರು ಜಿಲ್ಲೆಯ ತಗಡೂರಿನಲ್ಲಿ ಮೂವರಿಗೆ ಕಾಲರಾ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮದ ಪಿಡಿಒ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ತಗಡೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮಸ್ಥರು ವಾಂತಿ ಮತ್ತು ಭೇದಿಯಿಂದ ಅಸ್ವಸ್ಥರಾಗಿದ್ದರು. ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ೧೧೪ ಜನರ ಪರೀಕ್ಷಿಸಿದ್ದಾರೆ. ಈ ವೇಳೆ ಮೂವರಲ್ಲಿ ಕಾಲಾರ ಇರುವುದು ಪತ್ತೆಯಾಗಿದೆ.

ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ವಿಫಲರಾದ ಗ್ರಾಮದ ಪಿಡಿಒ ದಿವಾಕರ್‌ ಹಾಗೂ ಕಾರ್ಯಾಪಾಲಕ ಇಂಜಿನಿಯರ್‌ ಶಿವಕುಮಾರ್‌ ಅವರನ್ನು ಅಮಾನತು ಮಾಡಿ ಮೈಸೂರು ಜಿಲ್ಲಾ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಗಾಯಿತ್ರಿ ಆದೇಶ ಹೊರಡಿಸಿದ್ದಾರೆ.

WhatsApp Group Join Now
Telegram Group Join Now
Back to top button