ಕಾಂಗ್ರೆಸ್ ನಾಯಕರು ರಾಮಮಂದಿರಕ್ಕೆ ಹೋಗಲ್ಲ ಎಂದು ಹೇಳೇ ಇಲ್ಲ,: ಸತೀಶ್‌ ಜಾರಕಿಹೊಳಿ

WhatsApp Group Join Now
Telegram Group Join Now

ನವದೆಹಲಿ: ಕಾಂಗ್ರೆಸ್ ನಾಯಕರು ರಾಮಮಂದಿರಕ್ಕೆ ಹೋಗಲ್ಲ ಎಂದು ಹೇಳೇ ಇಲ್ಲ, ಬದಲಿಗೆ ಜ. 22ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲ್ಲ ಎಂದಿದ್ದಾರೆ ಎಂದು ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಇಡೀ ದೇಶದ ಆಸ್ತಿ, ಮತ್ತು ರಾಮನಲ್ಲಿ ಭಕ್ತಿಯುಳ್ಳವರು ಮಂದಿರಕ್ಕೆ ಹೋಗದಿರುತ್ತಾರೆಯೇ?.

ಕಾಂಗ್ರೆಸ್ ನಾಯಕರಿಗೆ ಅಕ್ಷೇಪಣೆ ಇರೋದು ರಾಮಮಂದಿರದ ಹೆಸರಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಎಂದು ಕಿಡಿಕಾರಿದರು.

ರಾಮನ ಬರ್ತ್ ಸರ್ಟಿಫಿಕೇಟ್ ಕೇಳಿದ್ದು ಒಬ್ಬ ನಾಯಕ, ಅದು ಅವರ ವೈಯಕ್ತಿಕ ವಿಚಾರ ಕಾಂಗ್ರೆಸ್ ಪಕ್ಷ ಅಂಥದನ್ನೆಲ್ಲ ಅನುಮೋದಿಸಲ್ಲ ಎಂದರು.

ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೋನಿಯಾ ಗಾಂಧಿ (Sonia Gandhi) ಮತ್ತು ಅಧೀರ್ ರಂಜನ್ (Adhir Ranjan Choudhury) ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿದೆ.

WhatsApp Group Join Now
Telegram Group Join Now
Back to top button