ಬೆಳಗಾವಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರಕ್ಕೆ ವಿನಯ ನಾವಲಗಟ್ಟಿ ಅಧ್ಯಕ್ಷ

WhatsApp Group Join Now
Telegram Group Join Now

ಬೆಳಗಾವಿ: ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ರಚಿಸಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲ್ಲೂಕು ಮಟ್ಟದ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾಮಟ್ಟದ ಪ್ರಾಧಿಕಾರದ ಅಧ್ಯಕ್ಷರಾಗಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಅವರನ್ನು ನೇಮಿಸಲಾಗಿದೆ.

 

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಯನ್ನು ಸರಕಾರ ರಚನೆಯಾದ ಮೇಲೆ ಅನುಷ್ಠಾನ ಮಾಡಿದ್ದು, ಅದನ್ನು ಜನರಿಗೆ ತಲುಪಿಸಲು ನಾವಲಗಟ್ಟಿಗೆ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿದೆ.

 

ಬೆಳಗಾವಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ  ಉಪಾಧ್ಯಕ್ಷರಾಗಿ ಮಲ್ಲಪ್ಪ ಮುರಗೋಡ್, ಶೇಖರಪ್ಪ ಇಟ್ಟಿ, ಬಸವರಾಜ್ ನಾಯ್ಕ, ಅಮೋಲ್ ಬೆಣ್ಣೆ, ರುದ್ರಯ್ಯ (ಕಾಶಿ) ಎಂ. ಹಿರೇಮಠ ನೇಮಕಮಾಡಲಾಗಿದೆ. ಅಲ್ಲದೇ ಸದಸ್ಯರಾಗಿ ಅನಿಲಕುಮಾರ್ ದಳವಾಯಿ, ಮಹಾಂತೇಶ ಕೆ.ಕದಾಡಿ, ಬೈರು ಟಿ. ಕಾಂಬ್ಳೆ, ಸೂರ್ಯಕಾಂತ್ ಕೆ. ಕುಲಕರ್ಣಿ, ಗಂಗಪ್ಪ ಬಿ. ಹುರಕಡ್ಡಿ , ಮಹಾಂತೇಶ ಕಳ್ಳಿ ಬಡ್ಡಿ, ಶಿವಕುಮಾ‌ರ್ ರಾಠೋಡ್, ಜಿ.ಬಿ. ರಂಗನಗೌಡರ್, ಗೋಪಾಲ್ ದಳವಾಯಿ, ಶಾನುಲ್ ತಹಶೀಲ್ದಾರ್, ರಮೇಶ್ ಪಾಟೀಲ್, ಸಿದ್ಧಾರ್ಥ ಶಿಂಗೆ, ವಿಜಯ್ ಅಕ್ಕಿವಾಟೆ, ಅರ್ಜುನ್ ಬಂಡಗರ್, ಯೋಗಿತಾ ಆರ್. ಕಾಂಬ್ಳೆ ಆಯ್ಕೆಯಾಗಿದ್ದಾರೆ. ಇವರ ಅಧಿಕಾರಾವಧಿ ಎರಡು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಕಾರ್ಯದರ್ಶಿ ಡಾ. ಪ್ರಕಾಶ್ ಜಿ.ಸಿ ಆದೇಶದಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Back to top button