ಬೆಳಗಾವಿಯಲ್ಲಿ ಪಂಚಾಯತ್ ರಾಜ್ ಎಇಇ ಮಹಾದೇವ ಬನ್ನೂರ ಮನೆ ಮೇಲೆ ಲೋಕಾಯುಕ್ತ ದಾಳಿ

WhatsApp Group Join Now
Telegram Group Join Now

ಬೆಳಗಾವಿಯಲ್ಲಿ ಪಂಚಾಯತ್ ರಾಜ್ ಎಇಇ ಮಹಾದೇವ ಬನ್ನೂರ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಳಗಾವಿಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಎಇಇ ಮಹಾದೇವ ಬನ್ನೂರರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಪಂಚಾಯತ್ ಎಇಇ ಬನ್ನೂರರ ಮನೆಯು ಬೆಳಗಾವಿ ತಾಲೂಕಿನ ಯಳ್ಳೂರ ಹೊರವಲಯದಲ್ಲಿದ್ದು, ದಾಳಿ ನಡೆಯಿತು.

ದಾಳಿಯು ಹೊನಗಾ ಗ್ರಾಮದ ಫಾರ್ಮ್ಹೌಸ್, ಹಿಂಡಲಗಾ ಬಳಿಯ ಅಪಾರ್ಟ್ಮೆಂಟ್, ಮತ್ತು ಗೋಕಾಕದ ನಿವಾಸ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಜರುಗಿತು.

ಈ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ, ಮಹಾದೇವ ಬನ್ನೂರರ ಮನೆಯಲ್ಲಿ ಅಕ್ರಮವಾಗಿ 27 ಲಕ್ಷ ರೂಪಾಯಿಗಳನ್ನು ಪತ್ತೆಹಚ್ಚಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಮತ್ತೊಮ್ಮೆ ದಾಳಿ ಮಾಡಲಾಗಿದೆ.

ಈ ಬಾರಿ ದಾಳಿ ನಡೆಸಿ, 27 ಲಕ್ಷ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದ ತಂಡದಿಂದ ಈ ದಾಳಿ ನಡೆಸಲಾಗುತ್ತಿದೆ.

ಪ್ರಸ್ತುತ ಬೆಂಗಳೂರಿನಲ್ಲಿರುವ ಎಇಇ ಮಹಾದೇವ ಬನ್ನೂರರ ಪತ್ನಿ ಮತ್ತು ಪುತ್ರಿ ಯಳ್ಳೂರಿನ ಮನೆಯಲ್ಲಿದ್ದಾರೆ. ಹಿಂಡಲಗಾ ಬಳಿಯ ಅಪಾರ್ಟ್ಮೆಂಟ್‌ನಲ್ಲಿ ಅವರ ಮಗ ಇದ್ದಾನೆ ಎನ್ನಲಾಗಿದ್ದು, ಆ ಸ್ಥಳದಲ್ಲಿಯೂ ದಾಳಿ ನಡೆದಿದೆ.

ಲೋಕಾಯುಕ್ತ ಅಧಿಕಾರಿಗಳು ಪ್ರತಿಯೊಂದು ಮಾಹಿತಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

WhatsApp Group Join Now
Telegram Group Join Now
Back to top button