ಭಾರತಿಯ ಮಾನವ ಹಕ್ಕುಗಳ ಸಂಘಟನೆ ಕಲ್ಲಡ್ಕ ಪ್ರಭಾಕರ ಭಟ್ ಗಡಿಪಾರು ಮಾಡುವಂತೆ ಒತ್ತಾಯ ಬೆಳಗಾವಿ ಡಿಸಿಪಿ ಪಿ.ವಿ. ಸ್ನೇಹಾ ಅವರಿಗೆ ಮನವಿ

WhatsApp Group Join Now
Telegram Group Join Now

ಬೆಳಗಾವಿ: ಆರ್​ಎಸ್​​ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ಹೇಳಿಕೆ ಖಂಡಿಸಿ ಭಾರತೀಯ ಮಾನವ ಹಕ್ಕುಗಳ ಸಂಘಟನೆ ವತಿಯಿಂದ ಬೆಳಗಾವಿ ಡಿಸಿಪಿ ಪಿ.ವಿ. ಸ್ನೇಹಾ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ  ಭಾರತಿಯ ಮಾನವ ಹಕ್ಕುಗಳ ಸಂಘಟನೆ  ಅಧ್ಯಕ್ಷೆ ಆಯಿಶಾ ಸನದಿ ಮಾತನಾಡಿ, ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಭಾಕರ ಭಟ್ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿದ್ದಾರೆ.

ವಿಚ್ಚೇದಿತ ಮಹಿಳೆಯರಿಗೆ ಕಳಂಕ ಹಚ್ಚುವ ಹಾಗೂ ಧಾರ್ಮಿಕ ಭಾವನೆಗಳಿಗೆ ಕುಂದು ಉಂಟುಮಾಡುವ ಹೇಳಿಕೆ ನೀಡಿದ್ದಾರೆ. ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರುವಂಥ ಮಾತುಗಳನ್ನು ಆಡಿರುವ ಭಟ್ ವಿರುದ್ಧ ಕ್ರಮ ಕೈಗೊಂಡು ಇವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಖು  ಎಂದು ಬೆಳಗಾವಿ ಡಿಸಿಪಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದರು. ಈ ವೇಳೆ ಭಾರತಿಯ ಮಾನವ ಹಕ್ಕುಗಳ ಸಂಘಟನೆ ಕಾರ್ಯಕರ್ತೆಯರು ಇದ್ದರು.

WhatsApp Group Join Now
Telegram Group Join Now
Back to top button