ಖ್ಯಾತ ಸಾಹಿತಿ, ಡಾ.ನಾಡೋಜ ಕಮಲಾ ಹಂಪನಾ ಇನ್ನಿಲ್ಲ

WhatsApp Group Join Now
Telegram Group Join Now

ಕನ್ನಡದ ಹಿರಿಯ ಸಾಹಿತಿ, ನಾಡೋಜ ಡಾ.ಕಮಲಾ ಹಂಪನಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಕಮಲಾ ಹಂಪನಾ ಅವರು ಬೆಂಗಳೂರಿನ ರಾಜಾಜಿನಗರದ ಮಗಳ ಮನೆಯಲ್ಲಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸಿ.ರಂಗಧಾಮನಾಯಕ್ ಹಾಗೂ ಲಕ್ಷಮ್ಮ ದಂಪತಿಯ ಪುತ್ರಿಯಾಗಿ ಕಮಲಾ ಹಂಪನಾ 1935ರ ಅಕ್ಟೋಬರ್ 28ರಂದು ಜನಿಸಿದ್ದರು.

ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ೧೯೫೩ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ೧೯೫೫-೫೮ರಲ್ಲಿ ಬಿ.ಎ. ಆನರ್ಸ್ ಮಾಡಿದರು. ೧೯೫೯ರಲ್ಲಿ ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

ಹಂ.ಪ.ನಾಗರಾಜಯ್ಯನವರು ಇವರ ಪತಿ. ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಅವರ ಸಂಶೋಧನೆಗಳು ಅವರಿಗೆ ಗೌರವಗಳನ್ನು ತಂದುಕೊಟ್ಟಿವೆ. ಜೈನ ಕೃತಿಗಳನ್ನು ಕುರಿತು ಆಳವಾದ ವಿವೇಚನೆಯನ್ನು ಒಳನೋಟವನ್ನು ಅವರು ತಮ್ಮ ಬರಹಗಳಲ್ಲಿ ಹೊಮ್ಮಿಸಿದ್ದಾರೆ.[೧]

ಸಾಹಿತ್ಯ ಕೃತಿಗಳು

ಕೃತಿಗಳು
ಕಥಾಸಂಕಲನ
ನಕ್ಕಿತು ಹಾಲಿನ ಬಟ್ಟಲು
ರೆಕ್ಕೆ ಮುರಿದಿತ್ತು
ಚಂದನಾ
ಬಣವೆ

ಸಂಶೋಧನೆ


ತುರಂಗ ಭಾರತ – ಒಂದು ಅಧ್ಯಯನ
ಶಾಂತಿನಾಥ
ಆದರ್ಶ ಜೈನ ಮಹಿಳೆಯರು
ಅನೇಕಾಂತವಾದ
ನಾಡು ನುಡಿ ನಾವು
ಜೈನ ಸಾಹಿತ್ಯ ಪರಿಸರ
ಬದ್ದವಣ
ರೋಣದ ಬಸದಿ

ವಿಮರ್ಶೆ-ವೈಚಾರಿಕ


ಬಾಸಿಂಗ
ಬಾಂದಳ
ಬಡಬಾಗ್ನಿ
ಬಿತ್ತರ
ಬೊಂಬಾಳ
ಗುಣದಂಕಕಾರ್ತಿ ಅತ್ತಿಮಬ್ಬೆ
ಸಂಪಾದನೆ
ಸುಕುಮಾರ ಚರಿತೆಯ ಸಂಗ್ರಹ
ಭರತೇಶ ವೈಭವ
ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿಗ್ರಂಥ
ಶ್ರೀ ಪಚ್ಚೆ
ಸಹಸ್ರಾಭಿಷೇಕ
ಚಾವುಂಡರಾಯ ಪುರಾಣ
ಡಾ.ಡಿ.ಎಲ್.ನರಸಿಂಹಾಚಾರ್ ರ ಆಯ್ದ ಲೇಖನಗಳು
ಹಳೆಯ ಗದ್ಯ ಸಾಹಿತ್ಯ
ದಾನಚಿಂತಾಮಣಿ – ಸ್ಮರಣಸಂಚಿಕೆ
ಜೈನಧರ್ಮ
ಸುವರ್ಣ ಭಾರತಿ, ಸಂಪುಟ – ೩
ಜೈನಕಥಾಕೋಶ (ಸಹ ಸಂಪಾದಕಿ)
ಷೋಡಶ ಭಾವಾನಾ ಕಾವ್ಯ

ಜೀವನ ಪರಿಚಯ

ಮಹಾವೀರರ ಜೀವನ ಸಂದೇಶ
ಮುಡಿಮಲ್ಲಿಗೆ
ಆ ಮುಖ
ವಚನ ಸಂಕಲನ
ಬಿಂದಲಿ
ಬುಗುಡಿ

ಶಿಶು ಸಾಹಿತ್ಯ

ಅಕ್ಕ ಮಹಾದೇವಿ
ಹೆಳವನಕಟ್ಟೆ ಗಿರಿಯಮ್ಮ
ವೀರವನಿತೆ ಓಬವ್ವ
ಜನ್ನ
ಚಿಕ್ಕವರಿಗಾಗಿ ಚಿತ್ರದುರ್ಗ
ಡಾ.ಬಿ.ಆರ್.ಅಂಬೇಡ್ಕರ್
ಮುಳಬಾಗಿಲು
ಮಕ್ಕಳೊಡನೆ ಮಾತುಕತೆ
ಅನುವಾದ
ಬೀಜಾಕ್ಷರ ಮಾಲೆ(ಸರಸ್ವತಿ ಬಾಯಿಗಿರಿಯವರು ತೆಲುಗಿನಲ್ಲಿ ಬರೆದಿರುವ ೬೫ ಪದ್ಯಗಳ ಭಾವಾನುವಾದ)
ಜಾತಿ ನಿರ್ಮೂಲನೆ (ಡಾ.ಅಂಬೇಡಕರರವರ Annihilation of caste ಕೃತಿಯ ಅನುವಾದ)
ಭಾರತದಲ್ಲಿ ಜಾತಿಗಳು
ಏಷಿಯಾದ ಹಣತೆಗಳು
ಜಾತಿಮೀಮಾಂಸೆ

ಆಕಾಶವಾಣಿ ನಾಟಕ – ರೂಪಕಗಳು

ಬಕುಳ
ಬಾನಾಡಿ
ಬೆಳ್ಳಕ್ಕಿ
ಕಾದಂಬರಿ
ಶರ್ಮಿಳಾ
ಗೌರವ ಪುರಸ್ಕಾರ
೨೦೦೩ ಡಿಸೆಂಬರ್ ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಜರುಗಿದ ೭೧ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.

WhatsApp Group Join Now
Telegram Group Join Now
Back to top button