ಖಾನಾಪೂರ ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಗೌಂಡಿ, ಟೈಲ್ಸ್ , ವೆಲ್ಡರ್, ಎಲೆಕ್ಟ್ರೀಷಿಯನ್, ಪ್ಲಂಬರ, ಕಿಟ್ ಗಳನ್ನು ವಿತರಿಸಲಾಯಿತು.
ಖಾನಾಪೂರ ತಾಲೂಕಿನಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ವತಿಯಿಂದ ಗೌಂಡಿ, ಟೈಲ್ಸ್ , ವೆಲ್ಡರ್, ಎಲೆಕ್ಟ್ರೀಷಿಯನ್, ಪ್ಲಂಬರ, ಕಿಟ್ ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಕಿಟ್ ವಿತರಣೆಯಲ್ಲಿ ಪಾಲ್ಗೊಂಡು ಕಿಟ್ ಪಡೆದುಕೊಂಡರು. ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ಇಂದ ಈ ಕಾರ್ಯಕ್ರಮಗಳು ಜರುಗುತ್ತಿದ್ದು “ಮಿಸ್ಟರ್ ಪರ್ಫೆಕ್ಟ್” ಶಾಸಕರಾದ ಸಚಿವ ಸಂತೋಷ್ ಲಾಡ್ ಅವರ ಕಾರ್ಮಿಕ ಪರವಾದ ನಿಲುವಿನಿಂದ ಇಂದು ಈ ರೀತಿಯ ಕಾರ್ಯಕ್ರಮಗಳು ಸರ್ಕಾರದ ಮಟ್ಟದಲ್ಲಿ ಜರುಗುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಕಾರ್ಮಿಕ ನಿರೀಕ್ಷಕರಾದ ಕುಮಾರಿ ದೀಪಾ ಬಂಡಿ ಹಾಗೂ ಸಿಬ್ಬಂದಿಗಳಾದ ಮಂಜು ವಾಲ್ಮೀಕಿ ಹಾಗೂ ಭೀಮರಾವ್ ಅವರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕರನ್ನು ಸನ್ಮಾನಿಸಿದ ಕರ್ನಾಟಕ ರಾಜ್ಯ ಇಂದಿರಾಗಾಂಧಿ ಯೂನಿಯನ್ ಪದಾಧಿಕಾರಿಗಳಾದ ಶ್ರೀ ತೌಸಿಫ್ ಮುಲ್ಲಾ ಶ್ರೀ ದತ್ತಾತ್ರೇಯ ಪೂಜಾರ ಹಾಗೂ ಶ್ರೀ ಪ್ರಭಾಕರ್ ಪಾಟೀಲ್ ಅಚ್ಚು ಕಟ್ಟಾಗಿ ನಡೆಸಿಕೊಟ್ಟಿದ್ದನ್ನು ಸ್ಲಾಗಿಸಿದರು.