ಮಸೀದಿ‌ ಒಡೆದು ಹಾಕಿ ಮಂದಿರ ಕಟ್ಟುತ್ತೇವೆ: ಪ್ರಚೋದನಾಕಾರಿ ಹೇಳಿಕೆ ನೀಡಿದ ಮಾಜಿ ಡಿಸಿಎಂ ಈಶ್ಚರಪ್ಪ

WhatsApp Group Join Now
Telegram Group Join Now

ಬೆಳಗಾವಿ: ಮುಸ್ಲಿಮರು ಎಲ್ಲೆಲ್ಲಿ ದೇವಸ್ಥಾನ‌ ಒಡೆದು ಮಸೀದಿ ನಿರ್ಮಿಸಿದ್ದೀರಿ. ಮರ್ಯಾದೆಯಿಂದ ಮಸೀದಿಗಳನ್ನ ತೆಗೆದುಕೊಳ್ಳಿ. ಇಲ್ಲವಾದಲ್ಲಿ ಹಿಂದೂ ಸಮಾಜ ಮಸೀದಿಗಳನ್ನ ಒಡೆದು ಪುಡಿ ಪುಡಿ ಮಾಡುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡ ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಶ್ರೀರಾಮಸೇನೆಯಿಂದ ಆಯೋಜನೆ ಮಾಡಿದ್ದ ‘ಮೋದಿ ಗೆಲ್ಲಿಸಿ.. ಭಾರತ ಉಳಿಸಿ’ ಅಭಿಯಾನ ಉದ್ಘಾಟಿಸಿ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಮಧುರಾ, ಕಾಶಿ ದೇವಸ್ಥಾನಗಳ ಕಾರ್ಯ ಸರ್ವೆ ಮಾಡುತ್ತೇವೆ. ಕೋರ್ಟ್‌ ಮುಖಾಂತರ ಸರ್ವೆ ನಡೆಯುತ್ತಿದೆ. ಕಾಶಿ ವಿಶ್ವನಾಥ ಮಧುರಾ ಶ್ರೀಕೃಷ್ಣ ದೇವಸ್ಥಾನವೂ ಶೀಘ್ರದಲ್ಲಿ ನಿರ್ಮಾಣ ಆಗುತ್ತವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಶ್ರೀರಾಮನ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮನ್ನ ವಿರೋಧ ಮಾಡಿದವರ ಹೊಟ್ಟೆಯಲ್ಲಿ ಕಸವಿಸಿ ಆಗುತ್ತಿದೆ. ಪಾಕಿಸ್ತಾನ ಸೇರಿ ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ‌. ಪಾಕಿಸ್ತಾನ ದೇಶದವರು ಮೋದಿ ಪ್ರಧಾನಿ ಆಗಿ ಬರಲಿ ಎಂದು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಮೋದಿ ಭಾರತೀಯ ಸಂಸ್ಕೃತಿಯನ್ನ ವಿಶ್ವಕ್ಕೆ ಸಾರಿದರು. ದೇಶವನ್ನ ಲೂಟಿ ಮಾಡಿದವರಿಗೆ ಭಾರತೀಯ ಸಂಸ್ಕೃತಿ ನಾಶ ಮಾಡಲು ಆಗಲಿಲ್ಲ. ಕಾಂಗ್ರೆಸ್ ಅವರ ಅಧಿಕಾರದ ಆಸೆಯಿಂದ ದೇಶ ತುಂಡು ತುಂಡಾಯಿತು. ಜನವರಿ 22 ರಂದು ರಾಮಮಂದಿರ ಉದ್ಘಾಟನೆ ದಿನದಂದು ಸ್ವತಂತ್ರ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದಿದ್ದಾರೆ.

WhatsApp Group Join Now
Telegram Group Join Now
Back to top button