ಬೆಳಗಾವಿ- ಮಿರಜ್ ವಿಶೇಷ ಪ್ಯಾಸೆಂಜರ್ ರೈಲು ಸಂಚಾರ

WhatsApp Group Join Now
Telegram Group Join Now

ಬೆಳಗಾವಿ :ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳಿಗೆ ತೀವ್ರ ಹಾನಿಯಾಗಿದ್ದು ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಳಗಾವಿ – ಮೀರಜ್ ನಡುವೆ ವಿಶೇಷ ಪ್ಯಾಸೆಂಜ‌ರ್ ರೈಲು ಓಡಿಸಲಾಗುತ್ತಿದೆ.

ಬೆಳಗಾವಿ – ಮೀರಜ್ ರೈಲು : ಪ್ರತಿದಿನ ಬೆಳಿಗ್ಗೆ 6.10ಕ್ಕೆ ಹೊರಟು 9.10ಕ್ಕೆ ಮೀರಜ್ ತಲುಪಲಿದೆ. ಮರಳಿ ಬೆಳಿಗ್ಗೆ 9.50ಕ್ಕೆ ಮೀರಜ್‌ನಿಂದ ಹೊರಟು ಮಧ್ಯಾಹ್ನ 12.50ಕ್ಕೆ ಬೆಳಗಾವಿ ತಲುಪುತ್ತದೆ.ಬೆಳಗಾವಿ-ಮೀರಜ್ ರೈಲು : ಮಧ್ಯಾಹ್ನ 1.30ರಿಂದ ಬೆಳಗಾವಿಯಿಂದ ಹೊರಟು ಸಂಜೆ 04.30ಕ್ಕೆ ಮೀರಜ್ ತಲುಪಲಿದೆ. ಮರಳಿ ಸಂಜೆ 05.358 ಮೀರಜ್‌ನಿಂದ ಹೊರಟು ರಾತ್ರಿ 08.35ಕ್ಕೆ ಬೆಳಗಾವಿ ತಲುಪುತ್ತದೆ.

ಜುಲೈ 31ರಿಂದ ಆಗಸ್ಟ್ 4ರವರೆಗೆ ಬೆಳಗಾವಿ-ಮೀರಜ್ ರೈಲು ದಿನಕ್ಕೆ 2 ಬಾರಿ ಓಡಾಟ ನಡೆಸಲಿದೆ. ಪ್ರಯಾಣಿಕರು ವಿಶೇಷ ರೈಲಿನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Back to top button