ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ : ಶೋಭಾಯಾತ್ರೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಧಾರವಾಡ : ನಾಳೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ಸಂಭ್ರಮದ ಮನೆ ಮಾಡಿದ್ದು, ಇದರ ಅಂಗವಾಗಿ ಧಾರವಾಡದಲ್ಲಿ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆ ಶೋಭಾಯಾತ್ರೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.
ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯಿಂದ ನಾಳೆ ಮದ್ಯಾಹ್ನ 1 ಗಂಟೆಗೆ ಶೋಭಾಯಾತ್ರೆ ಆಯೋಜಿಸಿತ್ತು. ಯಾತ್ರೆಗೆ ಅನುಮತಿ ನೀಡಲು ಪೊಲೀಸರು ಈ ವೇಳೆ ನಿರಾಕರಿಸಿದ್ದರು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ಸಂಘಟನೆ ಕೋರಿದ ಅನುಮತಿ ಮನವಿಯನ್ನು ತಿರಸ್ಕರಿಸಿದ್ದರು ಎಂದು ತಿಳಿದಿಬಂದಿದೆ.
ಆದರೆ ಇದೀಗ ಶೋಭಯಾತ್ರೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯಿಂದ ಶೋಭಾಯಾತ್ರೆ ಆಯೋಜಿಸಿತ್ತು. ನಾಳೆ ಮಧ್ಯಾಹ್ನ 1ಗಂಟೆಗೆ ಈ ಒಂದು ಸಂಘಟನೆಯಿಂದ ಬೃಹತ್ ಶೋಭಾಯಾತ್ರೆ ಆಯೋಜನೆ ಮಾಡಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.