ಮಾಸ್ಕೆನಟ್ಟಿ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಛೀಮಾರಿ
ಖಾನಾಪುರ ತಾಲೂಕಿನ ಭೂರುನಕಿ ಗ್ರಾಮ ಪಂಚಾಯತಿಯ ವಾರ್ಡ್ ಸಭೆ ಮಾಸ್ಕೆನಟ್ಟಿ ಗ್ರಾಮದಲ್ಲಿ ಜರಗಬೇಕಾಗಿತ್ತು ಆದರೆ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಯಾರು ಬಂದಿರಲಿಲ್ಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಕೂಡ ವಾರ್ಡ್ ಸಭೆಯಲ್ಲಿ ಹಾಜರಿರಲಿಲ್ಲ ಕೇವಲ ಕಾರ್ಯದರ್ಶಿಯವರನ್ನು ಕಳುಹಿಸಿ ಕಾಟಾಚಾರಕ್ಕೆ ಎಂಬಂತೆ ವಾರ್ಡ್ ಸಭೆ ನಡೆಸಲಾಗುತ್ತಿತ್ತು ಇದನ್ನು ಗಮನಿಸಿದ ಗ್ರಾಮಸ್ಥರು ಕಾರ್ಯದರ್ಶಿ ಪಿ ಟಿ ಯಳ್ಳೂರ ಅವರಿಗೆ ತರಾಟೆಗೆ ತೆಗೆದುಕೊಂಡರು ಅಧಿಕಾರಿಗಳನ್ನು ಗ್ರಾಮಕ್ಕೆ ಕರಿಸಿ ಗ್ರಾಮ ಸಭೆಯನ್ನು ನಡೆಸುವಂತೆ ಆಗ್ರಹಿಸಿದರು ಇಲ್ಲವಾದರೆ ಗ್ರಾಮ ಸಭೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಸಿದರು.
ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿವೆ ಅದನ್ನು ಕೇಳುವವರು ಯಾರು ಪಿಡಿಒ ಕೂಡ ಬಂದಿಲ್ಲ ಇನ್ನೂ ಮೇಲಾಧಿಕಾರಿಗಳು ಬರುವುದು ಕನಸಿನ ಮಾತು ಗ್ರಾಮಸ್ವರಾಜ್ಯ ಕನಸು ಇಲ್ಲಿ ನುಚ್ಚುನೂರಾಗಿತ್ತು. ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಳ್ಳಿಗಳಲ್ಲಿ ಗ್ರಾಮ ಸಭೆ ಹಾಗೂ ವಾರ್ಡ್ ಸಭೆ ಪ್ರಮುಖ ಪಾತ್ರ ವಹಿಸುತ್ತವೆ ಗ್ರಾಮ ಸಭೆಗಳು ಹಳ್ಳಿಯ ವಿಧಾನಸಭೆ ಅಷ್ಟೇ ಪ್ರಾಮುಖ್ಯತೆ ಪಡೆದಿವೆ ಆದರೆ ಅಧಿಕಾರಿಗಳ ನಿರ್ಲಕ್ಷಿತನದಿಂದ ಗ್ರಾಮ ಸಭೆಗಳು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಫಲವಾಗಿವೆ ಅದರಲ್ಲಿಯೂ ಗಡಿ ತಾಲೂಕು ಖಾನಾಪುರ ಗ್ರಾಮ ಸಭೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಪಿಡಿಒಗಳ ಉದ್ಧಟತನ ಹಾಗೂ ತಾಲೂಕಾ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗ್ರಾಮ ಸಭೆಗಳು ಸಮಂಜಸವಾಗಿ ಕಾನೂನು ಬದ್ಧವಾಗಿ ನಡೆಯುತ್ತಿಲ್ಲ ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ.
ಜನರನ್ನು ದೂರ ಬಿಟ್ಟು ಗ್ರಾಮ ಸಭೆಗಳನ್ನು ಮಾಡಲು ಜನಪ್ರತಿನಿಧಿಗಳು ಪಿಡಿಒಗಳು ಹೆಚ್ಚಿನ ಕ್ರಮ ವಹಿಸುತ್ತಿದ್ದಾರೆ ಇದರಿಂದಾಗಿ ಗ್ರಾಮ ಸಭೆಗಳು ಇದ್ದು ಇಲ್ಲದಂತಾಗಿದೆ. ಇನ್ನಾದರೂ ಮೇಲಾಧಿಕಾರಿಗಳು ಗಮನ ಹರಿಸಿ ಗ್ರಾಮ ಸಭೆಗಳನ್ನು ಅಚ್ಚುಕಟ್ಟಾಗಿ ನಡೆಸುವಂತೆ ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಆಗ್ರಹಿಸಿದ್ದಾರೆ ಭೂರುನಕಿ ಪಿಡಿಒ ಪರಶುರಾಮ್ ಸ್ಥಳೀಯವಾಗಿ ಗ್ರಾಮ ಪಂಚಾಯಿತಿಯಲ್ಲಿ ಇದ್ದರು ಮಾಸ್ಕೆನಟ್ಟಿಗ್ರಾಮದ ವಾರ್ಡ್ ಸಭೆ ಹಾಜರಾಗಿಲ್ಲ ಇವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಗ್ರಾಮಸಭೆಯಲ್ಲಾದರೂ ಹೆಚ್ಚಿನ ಅಧಿಕಾರಿಗಳು ಭಾಗವಹಿಸಿ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಇಲ್ಲವಾದರೆ ಸರ್ಕಾರದ ಕ್ರಮ ಹಾಗೂ ಸಂವಿಧಾನದ ಕಾನೂನುಗಳು ನಿರುಪಯುಕ್ತವಾಗುತ್ತವೆ. ಈ ಕುರಿತು ಪಂಚಾಯಿತಿ ರಾಜ್ಯ ಸಚಿವರ ಗಮನಕ್ಕೆ ಕೂಡ ತರಲಾಗುವುದು ಎಂದು ಜ್ಯೋತಿಬಾ ಬೆಂಡಿಗೇರಿ ತಿಳಿಸಿದ್ದಾರೆ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿ ಅಭಿವೃದ್ಧಿ ವೇಗವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಗ್ರಾಮಸಭೆಗಳಾಗಲಿ, ವಾರ್ಡ್ ಸಭೆಗಳಾಗಲಿ ಸಮಂಜಸವಾಗಿ ನಡೆಸದೇ ಇರುವುದು ಎಷ್ಟು ನ್ಯಾಯ ಇಂಥವರ ವಿರುದ್ಧ ಕ್ರಮ ಜರಗದೇ ಇರುವುದು ವ್ಯವಸ್ಥೆ ಹದಿಗೆಡಲು ಕಾರಣವಾಗಿದೆ.
ಪಿಡಿಒಗಳು ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿಕೊಂಡು ಇರಬೇಕು ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ ಆದರೆ ಒಬ್ಬ ಪಿಡಿಒ ಕೂಡ ಕೇಂದ್ರ ಸ್ಥಾನದಲ್ಲಿ ಮನೆ ಮಾಡಿಕೊಂಡು ಇರೋದಿಲ್ಲ ಇದು ಕಾನೂನಿಗೆ ವಿರುದ್ಧವಾಗಿದೆ ಹೀಗಿರುವಾಗ ಸರ್ಕಾರ ಹಾಗೂ ಮೇಲಾಧಿಕಾರಿಗಳು ಕೈಕಟ್ಟಿ ಕುಳಿತಿರೋದು ನೋವಿನ ಸಂಗತಿ.
ವರದಿ: ಜ್ಯೋತಿಬಾ ಬೆಂಡಿಗೇರಿ