ಬೆಳಗಾವಿ: ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ದಾಖಲೆಗಳಿಲ್ಲದ ₹7.98 . ನಗದು ಜಪ್ತಿ

WhatsApp Group Join Now
Telegram Group Join Now

ಬೆಳಗಾವಿ: ಖಾನಾಪುರ ವಿಧಾನಸಭಾ ಕ್ಷೇತ್ರದ ಖಾನಾಪುರ ತಾಲೂಕು ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿರುವ ಅನಧಿಕೃತ 7 ಲಕ್ಷ ರೂ  ನಗದನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

 

ಕಣಕುಂಬಿ ಚೆಕ್ ಪೋಸ್ಟಿನಲ್ಲಿ ಇಂದು ಬೆಳಗ್ಗೆ ಬೈಲಹೊಂಗಲದ ನಿವಾಸಿ  ಸಂಜಯ ಬಸವರಾಜ ರೆಡ್ಡಿ, ಗಾಂಧಿ ನಗರ ಓಣಿ, ವಣ್ಣೂರ, ಅವರು ಪ್ರಯಾಣಿಸುತ್ತಿದ್ದ ಬಸ್ಸು ಗೋವಾದಿಂದ ಬೆಳಗಾವಿಗೆ ಹೋಗುವ ಸಮಯದಲ್ಲಿ ವಾಹನವನ್ನು ಕರ್ತವ್ಯನಿರತ ಎಸ್.ಎಸ್.ಟಿ ತಂಡದವರು ಮತ್ತು ಪೋಲಿಸ್ ಸಿಬ್ಬಂದಿಗಳು ತಪಾಸಣೆ ಮಾಡಿದಾಗ  7,98,000/-ರೂ.ಗಳನ್ನು ಯಾವುದೇ ದಾಖಲೆಗಳಿಲ್ಲದ ನಗದು ದೊರಕಿದೆ.

 

 

ಅಧಿಕೃತ ದಾಖಲೆಗಳು ಪರಿಶೀಲನಾ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಮುಟ್ಟುಗೋಲು ಹಾಕಿಕೊಂಡ ರೂ. 7.98.000/- (ಏಳು ಲಕ್ಷದ ತೊಂಭತ್ತೆಂಟು ಸಾವಿರ) ರೂಪಾಯಿ ಹಣವನ್ನು ಖಾನಾಪುರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಎಸ್ಎಸ್ ಟಿ ತಂಡದ ಅಧಿಕಾರಿ ಮಲಗೌಡ ಪಾಟೀಲ ಅವರು ಸಹಾಯಕ ಚುನಾವಣಾಧಿಕಾರಿಗಳು ಖಾನಾಪುರ ವಿಧಾನಸಭಾ ಕ್ಷೇತ್ರ ಇವರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Back to top button