ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ

WhatsApp Group Join Now
Telegram Group Join Now

ಬೆಳಗಾವಿ, :ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಜನವರಿ 22 ರಂದು ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಪ್ರಾಣ ಪ್ರತಿಷ್ಠೆ ನೆರವೇರಲಿದೆ.

 

ಜ.22ರಂದು ಪಂಚಾಂಗದ ಪ್ರಕಾರ ಮೃಗಶಿರಾ ನಕ್ಷತ್ರವಿದೆ. ಆ ದಿನ ಮಧ್ಯಾಹ್ನ 12.15ರಿಂದ 12.45ರ ನಡುವೆ ವಿಗ್ರಹವನ್ನು ಗರ್ಭಗುಡಿ ಯಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರಾಣ ತುಂಬಲಾಗುತ್ತದೆ. ಈ ಸಮಯದಲ್ಲಿ ಅಭಿಜಿನ್ ಮುಹೂರ್ತವಿರುತ್ತದೆ. ಇದೇ ಸಮಯದಲ್ಲಿ ರಾಮನ ಜನನವಾಯಿತು ಎಂಬ ಕಾರಣದ ಜತೆಗೆ, ಈ ವೇಳೆ ಅಮೃತ ಸಿದ್ಧಿಯೋಗ, ಸರ್ವಾರ್ಥ ಸಿದ್ಧಿಯೋಗಗಳಿವೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ಈ ಮುಹೂರ್ತವನ್ನು ನಿಗದಿಪಡಿಸಿದ್ದು ಯಾರು? ಎಂಬ ಮಾಹಿತಿ ಟಿವಿ9 ಡಿಜಿಟಲ್​ಗೆ ಲಭ್ಯವಾಗಿದೆ.

 

ಬೆಳಗಾವಿಯ ನವ ಬೃಂದಾವನ ನಿವಾಸಿಯಾಗಿರುವ ವಿಜಯೇಂದ್ರ ಶರ್ಮಾ ಅವರು ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದಾರೆ. ವಿಜಯೇಂದ್ರ ಶರ್ಮಾ ಅವರು ವಿದ್ಯಾವಿಹಾರ ವಿದ್ಯಾಲಯ ಕುಲಪತಿಯಾಗಿದ್ದಾರೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ ಕೋಶ್ಯಾಧ್ಯಕ್ಷ ಸ್ವಾಮಿ ಗೋವಿಂದ್ ದೇವಗಿರಿ ಅವರು, ವಿಜಯೇಂದ್ರ ಶರ್ಮಾ ಅವರ ಬಳಿ ಮುಹೂರ್ತ ಕೇಳಿದ್ದರು.

 

ಬಳಿಕ ವಿಜಯೇಂದ್ರ ಶರ್ಮಾ ಅವರು ದೇವಾಲಯದ ಒಳಗೆ ಮೂರ್ತಿ ಪ್ರವೇಶ (ಜ.18) ಮತ್ತು ಪ್ರಾಣ ಪ್ರತಿಷ್ಠೆಗೆ (ಜ.22) ಈ ಎರಡು ದಿನದ ಮುಹೂರ್ತವನ್ನು ನಿಗದಿಪಡಿಸಿ 2023ರ ಏ.15ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ಗೆ ಪತ್ರದ ಮೂಲಕ ಕಳುಹಿಸುತ್ತಾರೆ.

ಶಂಕುಸ್ಥಾಪನೆಗೂ ಮುಹೂರ್ತ ನಿಗದಿ ಮಾಡಿದ್ದು ಇವರೆ

ಹೌದು 2020ರ ಆಗಸ್ಟ್​ 5 ರಂದು ಭದ್ರಯೋಗದಲ್ಲಿ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆ ನೆರವೇರಿದೆ. ಈ ಶಂಕುಸ್ಥಾಪನೆಯ ಮುಹೂರ್ತವನ್ನು ವಿಜಯೇಂದ್ರ ಶರ್ಮಾ ಅವರೇ ನೀಡಿದ್ದಾರೆ. ಬಳಿಕ ರಾಮಮಂದಿರ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸುತ್ತಾರೆ. ಆದರೆ ಇದೀಗ ಅನಾರೋಗ್ಯದ ಕಾರಣ ವಿಜಯೇಂದ್ರ ಶರ್ಮಾ ಅವರು ಅಯೋಧ್ಯೆಗೆ ಹೋಗುತ್ತಿಲ್ಲ.

WhatsApp Group Join Now
Telegram Group Join Now
Back to top button