ಮಹಿಳೆಗೆ ಅನ್ಯಾಯ ಮಾಡಿದ್ದು ಸಾಬೀತಾದರೆ ನಿವೃತ್ತಿ: ನಾನು ಈ ಭಾಗದ ಯಾವದೇ ಮಹಿಳೆಗೆ ಕಿರುಕುಳ ಕೊಟ್ಟ ಬಗ್ಗೆ ಉದಾಹರಣೆಗೆ ನೀಡಿದರೆ ನಾನು ಸೇವೆಯಿಂದ ನಿವೃತ್ತಿ ಆಗುತ್ತೇನೆಅಮಾನತಾದ ಪಿಎಸ್ಐ ನರಸಿಂಹರಾಜು
ಬೆಳಗಾವಿ: ನನ್ನ ವಿರುದ್ದ ಸಂಕೇಶ್ವರದ ಸಿಪಿಐ ಅವಜಿ ಹಾಗೂ ಸಿಬ್ಬಂದಿಗಳು ಸೇರಿ ಷಢ್ಯಂತ್ರ ಮಾಡಿ ನನ್ನ ಅಮಾನತು ಮಾಡುವ ಮೂಲಕ ಬಲಿಪಶು ಮಾಡಲಾಗಿದೆ. ನಾನು ಈ ಭಾಗದ ಯಾವದೇ ಮಹಿಳೆಗೆ ಕಿರುಕುಳ ಕೊಟ್ಟ ಬಗ್ಗೆ ಉದಾಹರಣೆಗೆ ನೀಡಿದರೆ ನಾನು ಸೇವೆಯಿಂದ ನಿವೃತ್ತಿ ಆಗುತ್ತೇನೆ ಎಂದು ಅಮಾನತು ಗೊಂಡಿರುವ ಪಿಎಸ್ ಐ ನರಸಿಂಹರಾಜು ಹೇಳಿದರು.
ಸಂಕೇಶ್ವರದ ನಗರದ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಸಂಕೇಶ್ವರ ಠಾಣೆಯಿಂದ ಹೊರಹಾಕಲು ಸಿಪಿಐ ಜೊತೆ ಇಬ್ಬರು ಸಿಬ್ಬಂದಿಗಳಾದ ನಾಗನೂರೆ ಹಾಗೂ ಜಂಬಗಿ ಎನ್ನುವರು ಕೂಡಾ ಶಾಮೀಲಾಗಿರುವದು ಸಂಶಯ ಇದೆ. ನಮ್ಮ ವಿರುದ್ದ ಷಢ್ಯಂತ್ರ ಬ್ಲಾಕ್ ಮೇಲ್ ಮಾಡಲಾಗಿದೆ. ನಾನು ನಿರಪರಾಧಿ ಯಾಗಿದ್ದೇನೆ. ಜಂಬಗಿ ನಾಗನೂರೆ ಇವರು ಇದರ ಬಗ್ಗೆ ಪಿತೂರಿ ಇರಬಹುದು ಎನ್ನುವ ಸಂಶಯ ಇದೆ ಎಂದರು.
ನಾನು ಈ ವಿಷಯವನ್ನು ನ್ಯಾಯಾಲಯದ ಲ್ಲಿ ಕಾನೂನಿನಲ್ಲಿ ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮುಖಾಂತರ ನ್ಯಾಯ ಪಡೆಯುತ್ತೇನೆ. ಈ ವಿಷಯವನ್ನು ಸವಾಲಾಗಿ ಸ್ವೀಕಾರ ಮಾಡುತ್ತೇನೆ ಎಂದ ಅವರು, ಒಂದು ಸಣ್ಣ ವಿಷಯಕ್ಕೆ ಸಿಪಿಐ ಜೊತೆ ಭಿನ್ನಾಭಿಪ್ರಾಯ ಬಂತು. 3 ಲಕ್ಷ ವೆಚ್ಚದಲ್ಲಿ ಸಿಪಿಐ ರೂಮ್ ಸುಧಾರಣೆಗಾಗಿ ಖರ್ಚು ಮಾಡಿದ್ದರು. ಇದರ ವಿರುದ್ದ ಧ್ವನಿ ಎತ್ತಿರುವ ನನ್ನನ್ನು ಈ ಊರಿನಿಂದ ಹೊರಹಾಕಲು ಪ್ರಯತ್ನದಿಂದ ಸಿಪಿಐ ಹಾಗೂ ಕೆಲ ಸಿಬ್ಬಂದಿಗಳು ಸೇರಿ ಈ ರೀತಿಯಾಗಿ ನನ್ನನ್ನು ತೇಜೋವಧೆ ಮಾಡಲಾಗಿದೆ.
ಯಾವದೇ ಸತ್ಯಾಂಶವನ್ನು ಅರಿಯದೆ, ನನ್ನ ಕರೆದು ವಿಚಾರಣೆ ಮಾಡದೆ ಅಮಾನತು ಮಾಡಲಾಗಿದೆ. ಒತ್ತಾಯ ಪೂರ್ವಕವಾಗಿ ಮಹಿಳೆ ಕಡೆಯಿಂದ ಬರೆಯಿಸಿ ಕೊಳ್ಳಲಾಗಿದೆ. ನನ್ನ ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ. ಇದರಲ್ಲಿ ಸತ್ತಾಂಶ ಇಲ್ಲ. ಜಿಲ್ಲಾ ಪೊಲೀಸ ವರಿಷ್ಠ ಭೀಮಾಶಂಕರ ಗುಳೇದ ಅವರು ಏಕಪಕ್ಷೀಯವಾಗಿ ಅಮಾನತು ಮಾಡಿದ್ದಾರೆ ಎಂದು ದೂರಿದರು.
ಮಹಿಳೆಯೋರ್ವಳು ಅಕ್ಕಪಕ್ಕ ದವರ ಜೊತೆ ತಂಟೆ ಮಾಡಿದ್ದರು. ಅವರಿಗೆ ರಕ್ಷಣೆಗಾಗಿ ನನ್ನ ನಂಬರ ನೀಡಿದ್ದೇನೆ. ಅವರಿಗೆ ಮಕ್ಕಳ ಅನಾರೋಗ್ಯ ಹಿನ್ನೆಲೆಯಲ್ಲಿ ಆರ್ಥಿಕ ಸಹಾಯ ಮಾಡಿದ್ದೇವೆ. ವಿದ್ಯಾ ಗೋಲ್ಡ್ ಜುವೇಲರಸ್ ನಲ್ಲಿ 20 ಸಾವಿರ ಚಿನ್ನ ಕೊಡಿಸಿದ್ದೇವೆ. ಗೆಳೆಯರ ಹಾಗೆ ಇದ್ದೇವೆ ಇದನ್ನು ನನ್ನ ತೇತೋವಧೆಗೆ ಬಳಸಲಾಗಿದೆ ಎಂದರು.
ಕೆಲ ಪೊಲೀಸ ಸಿಬ್ಬಂದಿಗಳು ಸಂಕೇಶ್ವರದ ಲ್ಲಿ ಪ್ಲಾಟ್ ಗಳು ಹಾಗೂ ಬಿಜನೇಸ್ ಮಾಡಿಕೊಂಡಿದ್ದಾರೆ. ಅದನ್ನು ವಿರೋಧ ಮಾಡಿದ್ದಕ್ಕೆ ನನ್ನನ್ನ ಗುರಿ ಮಾಡಲಾಯಿತು. ಹಿಂದೆಯಿಂದಲು ನನ್ನ ತೇರಜೋವದೆ ಮಾಡುವ ಕೆಲಸ ಮಾಡಲಾಗಿದೆ. ಅವಜಿ ಅವರಿಗೆ ನನ್ನ ಮೇಲೆ ಎನೋ ಅಸಮಾಧಾನ ಇತ್ತು ಗೊತ್ತಿಲ್ಲ. ಮಹಿಳೆ ಮಾಡಿದ ಕರೆಗಾಗಿ ನೇರವಾಗಿ ರಾತ್ರಿ ಹೆಣ್ಣುಮಗಳ ಮನೆಗೆ ಹೋಗಿ ಅರ್ಜಿ ಬರೆಯಿಸಿಕೊಂಡು ಎಸ್ ಪಿ ಅವರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.