ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಸುರಿಮಳೆ..! ಮೂರೇ ದಿನಗಳಲ್ಲಿ 400 ಕೋಟಿ ಗಳಿಕೆ ಕಂಡ ಪ್ರಭಾಸ್‌ ಸಿನಿಮಾ

WhatsApp Group Join Now
Telegram Group Join Now

Salar: ಇತ್ತೀಚೆಗಷ್ಟೇ ಫ್ಲಾಪ್‌ಗಳನ್ನು ನೀಡಿರುವ ನಟ ಪ್ರಭಾಸ್, ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಸಲಾರ್’ ಚಿತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರ ಅದ್ಧೂರಿ ವೆಚ್ಚದಲ್ಲಿ ತಯಾರಾಗಿದ್ದು.. ನಾಯಕನಂತೆಯೇ ಮಲಯಾಳಂ ನಟ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ…

 

ಡಿಸೆಂಬರ್ 22 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ ಈ ಸಲಾರ್‌ ಸಿನಿಮಾ ಮೂರೇ ದಿನಗಳಲ್ಲಿ ಚಿತ್ರ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ… 400ರ ಸಮೀಪಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ..

 

ಅಲ್ಲದೇ ಚಿತ್ರಕ್ಕೆ ಪಾಸಿಟಿವ್ ರಿವ್ಯೂ ಸಿಗುತ್ತಿದ್ದು.. ಇಂದು ಕ್ರಿಸ್ ಮಸ್ ರಜೆ ಇರುವುದರಿಂದ 5 ದಿನಗಳೊಳಗೆ ಚಿತ್ರ 500 ಕೋಟಿ ತಲುಪಲಿದೆ ಎಂದು ವರದಿಮಾಡಲಾಗುತ್ತಿದೆ..

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರವನ್ನು ಆಕ್ಷನ್ ಪವರ್ ಪ್ಯಾಕ್ಡ್ ಚಿತ್ರವಾಗಿ ನಿರ್ದೇಶಿಸಿದ್ದು.. ಪ್ರಭಾಸ್ ಮತ್ತು ಪೃಥ್ವಿರಾಜ್ ಅಭಿನಯವು ಅಭಿಮಾನಿಗಳ ಹೃದಯವನ್ನು ಕದ್ದಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿ ಶ್ರುತಿ ಹಾಸನ್ ನಟಿಸಿದ್ದಾರೆ. ಜಗಪತಿ ಬಾಬು, ಮೈಮ್ ಗೋಪಿ, ಶ್ರೇಯಾ ರೆಡ್ಡಿ, ಬಾಬಿ ಸಿಂಹ, ಜಾನ್ ವಿಜಯ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಹಾಗೂ ಬಿಡುಗಡೆ ದಿನಾಂಕದ ಮಾಹಿತಿ ಹೊರಬೀಳಲಿದೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Back to top button