ಸರ್ಕಾರದಿಂದ ಮತ್ತೊಂದು ಗ್ಯಾರಂಟಿ ಯೋಜನೆ; ಡಿಸೆಂಬರ್ 26ರಿಂದ ‘ಯುವನಿಧಿ’ ನೋಂದಣಿಗೆ ಚಾಲನೆ
ಬೆಂಗಳೂರು: ರಾಜ್ಯಸರ್ಕರದ ಮಹತ್ವಾಕಾಂಕ್ಷಿ 4ನೇ ಗ್ಯಾರಂಟಿ ಯೋಜನೆಗೆ ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದೆ. ನಿರುದ್ಯೋಗಿ ಪದವೀಧರರಿಗೆ ಆರ್ಥಿಕ ನೆರವು ನೀಡುವ ಯುವನಿಧಿ ಯೋಜನೆಗೆ ಡಿಸೆಂಬರ್ 26ರಿಂದ ನೋಂದಣಿ ಆರಂಭವಾಗಲಿದೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಡಿ.26ರಿಂದ ಯುವನಿಧಿ ನೋಂದಣಿಗೆ ಚಾಲನೆ ದೊರೆಯಲಿದೆ ಎಂದರು.
ಯೋಜನೆ ನೋಂದಣಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಚಲನೆ ನೀಡಲಿದ್ದಾರೆ. ಜನವರಿ 12ರಿಂದ ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.
ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ 3000 ಹಾಗೂ ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1500 ರೂ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ.
Follow Us