ಸರ್ಕಾರಿ ಜಾಗದಲ್ಲಿ ಹನುಮಾನ್‌ ಧ್ವಜ ಹಾರಿಸಲು ಅವಕಾಶವಿಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್

WhatsApp Group Join Now
Telegram Group Join Now

ತುಮಕೂರು: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದಕ್ಕೆ ಸಂಬಂಧಿಸಿದಂತೆ, ತುಮಕೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬೇರೆ ಕಡೆ ಹನುಮಾನ್‌ ಧ್ವಜ ಹಾರಿಸಲು ಯಾರದ್ದೂ ತಕರಾರು ಇಲ್ಲ. ಸರ್ಕಾರಿ ಜಾಗದಲ್ಲಿ ಹನುಮಾನ್‌ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.

 

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಹನುಮಾನ ಧ್ವಜ ಇಳಿಸಿದ ಕುರಿತು ಪ್ರತಿಕ್ರಿಯಿಸಿ, ರಾಷ್ಟ್ರಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿ ನಿಂದ ಅನುಮತಿ ಪಡೆದಿದ್ದರು. ಆದರೆ ರಾಷ್ಟ್ರಧ್ವಜ ಬದಲು ಹನುಮ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ತೆರವುಗೊಳಿಸಿದ್ದಾರೆ. ಬಳಿಕ ಕೆಲವು ಪ್ರತಿಭಟನೆಗಳು ನಡೆದವು ಎಂದು ಸ್ಪಷ್ಪಪಡಿಸಿದರು.

 

ರಾಷ್ಟ್ರ ಧ್ವಜ ಹಾಕುತ್ತೇವೆ ಎಂದು ಊರಿನವರೆಲ್ಲ ಹೇಳಿದ್ದು ಒಳ್ಳೆಯದೇ. ಆದರೆ, ನಂತರ ಬೇರೆಯ ಧ್ವಜವನ್ನ ಹಾಕಿದ್ದಾರೆ. ಅದಾದ ಬಳಿಕ ಬೇರೆ ಬೇರೆಯವರು ಬೇರೆ ಧ್ವಜ ಹಾಕುತ್ತೇವೆ ಅಂತಾ ಹೇಳಿದ್ದಾರೆ. ಕೆಲವರು ಅಂಬೇಡ್ಕರ್, ಕೆಲವರು ಕೆಂಪೇಗೌಡ ಧ್ವಜ ಹಾರಿಸುತ್ತೇವೆ ಎಂದಿದ್ದಾರೆ ಪರಮೇಶ್ವರ್ ವಿವರಿಸಿದರು.ರಾಜ್ಯ ಸರ್ಕಾರ ಹಿಂದೂ ವಿರೋಧಿಗಳು ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ ನಾವು ಕೂಡ ಹೇಳುತ್ತಿದ್ದೇವೆ. ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ ಎಂದು ತಿರುಗೇಟು ನೀಡಿದರು.

 

ಲಘು ಲಾಠಿ ಪ್ರಹಾರ ನಡೆಸಿ ರಾಷ್ಟ್ರೀಯ ಧ್ವಜವನ್ನ ಹಾರಿಸಲಾಗಿದೆ. ಸಮಾಜದಲ್ಲಿ ಇದು ಒಂದು ರೀತಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಕಾನೂನಿಗೆ ವಿರುದ್ಧವಾದ ಕೆಲಸವೆಂದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಶಾಂತಿಕಾಪಾಡುವಂತೆ ಮನವಿ ಮಾಡಿದ್ದೇನೆ. ಅಲ್ಲದೆ ಜಾತಿಗಣತಿ ವರದಿ ಸ್ವೀಕರಿಸುವಂತೆ ನಾವೆಲ್ಲಾ ಒತ್ತಾಯ ಮಾಡಿದ್ದೇವೆ. ಸರಕಾರದಿಂದ ಜಾತಿಗಣತಿಗಾಗಿ 168 ಕೋಟಿ ರೂ. ಹಣ ಖರ್ಚು ಮಾಡಿದ್ದೇವೆ. ಜಾತಿಗಣತಿ ವರದಿ ಕೊಟ್ಟಾಗ ಸರ್ಕಾರ ಸ್ವೀಕರಿಸಬೇಕು. ವಿಶ್ಲೇಷಣೆ, ಚರ್ಚೆ ಆಮೇಲೆ. ವರದಿಯನ್ನೇ ತೆಗೆದುಕೊಳ್ಳಲ್ಲ ಎಂದು ಹೇಳಲಾಗುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Back to top button