ಖಾನಾಪುರ ತಾಲೂಕಿನ ಭೂರುನಕಿ ಗ್ರಾಮ ಸಭೆ ರದ್ದು, ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಛೀಮಾರಿ
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಭೂರುನಕಿ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 12/01/2024 ರಂದು ಭುರುನಕಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಸಭೆ ಕರೆಯಲಾಗಿತ್ತು.
ತಾಲೂಕ ಪಂಚಾಯತಿಯಿಂದ ಗ್ರಾಮ ಸಭೆಗೆ ನೇಮಿಸಿದಂತಹ ನೋಡಲಾಧಿಕಾರಿ ಗ್ರಾಮ ಸಭೆಗೆ ಗೈರಾಗಿದ್ದರು ಮತ್ತು ಕೆಲವು ಇಲಾಖೆ ಅಧಿಕಾರಿಗಳು . ಕೂಡ ಗೈರಾಗಿದ್ದರು.
ಕೆಲವು ಗ್ರಾಮಗಳ ವಾರ್ಡ್ ಸಭೆಯಲ್ಲಿ ಗ್ರಾಮ ಸಭೆಗೆ ಕಡ್ಡಾಯವಾಗಿ ಎಲ್ಲಾ ಇಲಾಖಾವಾರು ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಹಾಜರಿರಬೇಕು ಅಂತ ಠರಾವ್ ಹಾಕಿದ್ರು ಕೂಡ ಗ್ರಾಮ ಸಭೆಗೆ ಗೈರಾಗಿದ್ದಾರೆ
ಗ್ರಾಮ ಸಭೆ ನಡೆಸಬೇಕಾದ ನೋಡಲಾಧಿಕಾರಿ ಹಾಗೂ ಕೆಲವು ಇಲಾಖೆ ಅಧಿಕಾರಿಗಳು ಗೈರಾಗಿ ಗ್ರಾಮ ಸಭೆಗೆ ಅಗೌರವ ತೋರಿದ್ದಾರೆ.
ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿವೆ ಅದನ್ನು ಕೇಳುವವರು ಯಾರು ಮಾಸ್ಕೆನಟ್ಟಿ ಗ್ರಾಮದ ವಾರ್ಡ್ ಸಭೆಗೆ ಪಿಡಿಒ ಕೂಡ ಬಂದಿಲ್ಲ ಇನ್ನೂ ಗ್ರಾಮ ಸಭೆ ನಡೆಸಬೇಕಾದ ನೋಡಲ್ ಅಧಿಕಾರಿ ಕೂಡ ಗೈರಾಗಿದ್ರು ಮತ್ತು ಇಲಾಖಾವಾರು ಅಧಿಕಾರಿಗಳು ಬರುವುದು ಕನಸಿನ ಮಾತು ಗ್ರಾಮಸ್ವರಾಜ್ಯ ಕನಸು ಇಲ್ಲಿ ನುಚ್ಚುನೂರಾಗಿತ್ತು. ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಳ್ಳಿಗಳಲ್ಲಿ ಗ್ರಾಮ ಸಭೆ ಹಾಗೂ ವಾರ್ಡ್ ಸಭೆ ಪ್ರಮುಖ ಪಾತ್ರ ವಹಿಸುತ್ತವೆ ಗ್ರಾಮ ಸಭೆಗಳು ಹಳ್ಳಿಯ ವಿಧಾನಸಭೆ ಅಷ್ಟೇ ಪ್ರಾಮುಖ್ಯತೆ ಪಡೆದಿವೆ ಆದರೆ ಅಧಿಕಾರಿಗಳ ನಿರ್ಲಕ್ಷಿತನದಿಂದ ಗ್ರಾಮ ಸಭೆಗಳು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಫಲವಾಗಿವೆ ಅದರಲ್ಲಿಯೂ ಗಡಿ ತಾಲೂಕು ಖಾನಾಪುರ ಗ್ರಾಮ ಸಭೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ಗ್ರಾಮ ಸಭೆಗೆ ನೇಮಿಸಿದಂತ ನೋಡಲಾಧಿಕಾರಿ ಪಿಡಿಒಗಳ ಉದ್ಧಟತನ ಹಾಗೂ ತಾಲೂಕಾ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗ್ರಾಮ ಸಭೆಗಳು ಸಮಂಜಸವಾಗಿ ಕಾನೂನು ಬದ್ಧವಾಗಿ ನಡೆಯುತ್ತಿಲ್ಲ ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿ ಅಭಿವೃದ್ಧಿ ವೇಗವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಗ್ರಾಮಸಭೆಗಳಾಗಲಿ, ವಾರ್ಡ್ ಸಭೆಗಳಾಗಲಿ ಸಮಂಜಸವಾಗಿ ನಡೆಸದೇ ಇರುವುದು ಎಷ್ಟು ನ್ಯಾಯ ಇಂಥವರ ವಿರುದ್ಧ ಕ್ರಮ ಜರಗದೇ ಇರುವುದು ವ್ಯವಸ್ಥೆ ಹದಿಗೆಡಲು ಕಾರಣವಾಗಿದೆ ಅಂತ ಸಮಾಜ ಸೇವಕಾ ಜ್ಯೋತಿಬಾ ಬೆಂಡಿಗೇರಿ ಹೇಳಿದರು.
ಗ್ರಾಮ ಸಭೆ ನಡೆಸಬೇಕಾದ ನೋಡಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬರದೆ ಇರುವುದರಿಂದ
ಗ್ರಾಮ ಸಭೆ ರದ್ದು ಮಾಡಿ ಮುಂದೂಡಲಾಗಿದೆ ಮುಂದಿನ ದಿನಾಂಕ ಚರ್ಚೆ ಮಾಡಿ ತಿಳಿಸಲಾಗುವುದು ಅಂತ ಗ್ರಾಮ ಪಂಚಾಯತಿ ಸದಸ್ಯ ವಿಠ್ಠಲ್ ಸಾಗರೆಕರ್ ಹೇಳಿದರು*
ಸರ್ಕಾರದ ಆದೇಶದ ಪ್ರಕಾರ 2023 ರ ಡಿಸೆಂಬರ ತಿಂಗಳ ಒಳಗಾಗಿ ವಾರ್ಡ್ ಸಭೆಗಳು ಹಾಗೂ ಗ್ರಾಮ ಸಭೆಗಳು ಮುಗಿಸಬೇಕಂತ ಸರ್ಕಾರದ ಆದೇಶ ಹೊರಡಿಸಿದರೂ ಕೂಡ ಇನ್ನೂವರೆಗೂ ಗ್ರಾಮ ಸಭೆ ಮಾಡದೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ. ಅಧಿಕಾರಿಗಳು ಜನಾಭಿಪ್ರಾಯ ಪಡೆದು ಆಕ್ಷನ್ ಫ್ಯಾನ್ ಮಾಡ್ಲಿಲ್ಲ ಅಂದ್ರೆ ಅಭಿವೃದ್ಧಿ ಹೇಗೆ ಸಾಧ್ಯ?. ಇದಕ್ಕೆ ಹೊಣೆಗಾರರು ಯಾರು? ಎನ್ನುವುದು ಸಾರ್ವಜನಿಕರಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ
ಜನಪ್ರತಿನಧಿಗಳು ಎಚ್ಚೆತ್ತುಕೊಂಡು ಇದರ ಬಗ್ಗೆ ಪರಿಶೀಲಿಸಿ ತಪ್ಪಿಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
ವರದಿ: ಜ್ಯೋತಿಬಾ ಬೆಂಡಿಗೇರಿ