ತಮಿಳು ನಟ ವಿಜಯ್ ರಾಜಕೀಯ ಪಕ್ಷದ ಹೆಸರು ಘೋಷಣೆ

WhatsApp Group Join Now
Telegram Group Join Now

ಚೆನ್ನೈ: ದಳಪತಿ ಖ್ಯಾತಿಯ ತಮಿಳು ನಟ ವಿಜಯ್ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದ್ದು, ವಿಜಯ್ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ.

ದಳಪತಿ ವಿಜಯ್ ತಮ್ಮ ನೂತನ ರಾಜಕೀಯ ಪಕ್ಷಕ್ಕೆ ತಮಿಳಗ ವಿಟ್ರಿ ಕಜಂ ಎಂಬ ಹೆಸರಿಟ್ಟಿದ್ದಾರೆ. ತಮಿಳಗ ವಿಟ್ರಿ ಕಜಂ ಅಂದ್ರೆ ತಮಿಳಿಗನ ಯಶಸ್ಸಿನ ಕಾಲ ಎಂದು ಅರ್ಥ. ತಮಿಳುನಾಡಿನಲ್ಲಿ ಹೊಸ ರಾಜಕೀಯದ ಅಲೆ ಸೃಷ್ಟಿಸಲು ಸಜ್ಜಾಗಿರೋ ನಟ ವಿಜಯ್ ಅವರು ಯಶಸ್ಸಿನ ಕಾಲ ಸೃಷ್ಟಿಸಲು ಹೊಸ ಹೆಜ್ಜೆ ಇಟ್ಟಿದ್ದಾರೆ.

ಸದ್ಯ ಹೊಸ ಪಕ್ಷದ ಹೆಸರು ಘೋಷಿಸಿರುವ ವಿಜಯ್ ಅವರು ತಮ್ಮ ರಾಜಕೀಯ ಜರ್ನಿಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಇತ್ತೀಚೆಗೆ 200 ಸದಸ್ಯರ ಸಾಮಾನ್ಯ ಸದಸ್ಯರ ಸಭೆ ನಡೆಸಿದ್ದ ವಿಜಯ್ ಅವರು ರಾಜಕೀಯ ಪಕ್ಷದ ಹೆಸರಿಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಚುನಾವಣಾ ಆಯೋಗದ ಒಪ್ಪಿಗೆ ಬಳಿಕ ಪಕ್ಷದ ಹೆಸರು ಪ್ರಕಟವಾಗಿದೆ.

WhatsApp Group Join Now
Telegram Group Join Now
Back to top button