ಲೋಕಸಭಾ ಚುನಾವಣೆಗೆ ನಿಲ್ಲಲು ನನಗೆ ಆಸೆ ಇಲ್ಲ- ಕಾರ್ಮಿಕ ಸಚಿವ ಸಂತೋಷ ಲಾಡ್

WhatsApp Group Join Now
Telegram Group Join Now

ಧಾರವಾಡ : ನಾನು ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಬೇಕು. ನಾನು ಇಲ್ಲೇ ಕೆಲಸ ಮಾಡಬೇಕು. ಹಾಗಾಗಿ ಲೋಕಸಭಾ ಚುನಾವಣೆಗೆ ನಿಲ್ಲಲು ನನಗೆ ಆಸೆ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಸಚಿವ ಲಾಡ್ , ನಮ್ಮ ಪಾರ್ಟಿಯಲ್ಲಿ ಯಾರೇ ನಿಂತರೂ ನನ್ನಷ್ಟೇ ಸೂಕ್ತರಿದ್ದಾರೆ. ನೋಡೋಣ ಯಾರಿಗೆ ಕೊಡುತ್ತಾರೋ ಯಾರು ಕ್ಲಿಕ್ ಆಗುತ್ತಾರೋ ನೋಡೋಣ .ರಾಷ್ಟ್ರನಾಯಕರು ನಮಗೆ ಎಲ್ಲಾ ಸಚಿವರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರದ ನಡುವೆ ಯಾವ ರೀತಿಯ ಬಾಂಧವ್ಯ ಇರಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದಾರೆ.ಎಂದರು

ಡಿಸಿಎಂ ನೇಮಕ ವಿಚಾರವು ಪಕ್ಷದ ಹೈ ಕಮಾಂಡಗೆ ಬಿಟ್ಟ ವಿಚಾರವಾಗಿದೆ. ಅದರ ಸೂಕ್ತ ನಿರ್ಧಾರ ನಮ್ಮನಾಯಕರು ತೆಗೆದುಕೊಳ್ಳುತ್ತಾರೆ. ನಿಗಮ ಮಂಡಳಿಗಳಿಗೆ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಶಾಸಕರನ್ನು ಆಯ್ಕೆ ಮಾಡಬೇಕು ಎಂಬ ತೀರ್ಮಾನ ಆಗಿದೆ ಎಂದು ಹೇಳಿದ್ದರು

WhatsApp Group Join Now
Telegram Group Join Now
Back to top button